Tuesday, June 14, 2011

ತೃತೀಯ ಸೆಮೆಸ್ಟರ್ ಬಿ.ಎ.ಗೆ ಇರುವ ಪಮ್ಪನ ಪದ್ಯಗಳು

ತೃತೀಯ ಸೆಮೆಸ್ಟರ್ ಬಿ.ಎ.ಗೆ ಇರುವ ಪಂಪನ ಪದ್ಯ;






ಪಂಪ ಭಾರತದ ೯ನೇ ಆಶ್ವಾಸದಿಂದ ಆಯ್ದ ಪದ್ಯಗಳು.

ವ/ ನಾರಾಯಣಂಗೆ ಯುಧಿಷ್ಟಿರಂ ನಿಷ್ಟಿತ ಕಾರ್ಯಮನನುಷ್ಟಿಸಲೆಂದಿಂತೆಂದಂ

ಅವನೀನಾಥನ ಗೆಯ್ದ.........ಕೊಲಲ್ ಸಾಲದೇ

ವ/ ಧರ್ಮರಾಜಂ ರಾಜರಾಜನಲ್ಲಿಗೆ........ಬಿನ್ನಪಂಗೆಯ್ದ ಕುರುರಾಜಂ( ಈ ಮಧ್ಯೆ ಕಮ್ದ ವೃತ್ತಗಳಿಲ್ಲ.)

ಲೋಕ ಗುರು.....ಪಿರಿಯರುಮೊಳರೆ

ವ/ ಎಂದು ತನ್ನ... ಮೊಗಮಂ ನೋಡಿ

ಬರವೇಳಎಂಬುದು.....ದುರ್ಯೋಧನಂ

ಸಂಸಾರದೊಳಿನ್ನೆನ್ನ....ಪವಿತ್ರಗಾತ್ರನಾದೆಂ

ಬಂದ ಬರವಾವುದಿದು..... ಳೆಂಬುದುಮಾಗಳ್

ಅಯ ನಯ......ಪಿರಿಯರುಮೊಳರೆ

ಕುವಳಯ ಬಾಂಧವ..ನೃಪತೀ

ಮನಕತದಿಂ...ಕುರುರಾಜಾ

ಪಟ್ಟದ ಮೊದಲಿಗ...

ತೀರದುದುಂಟೆ

ಮುನ್ನಿನ ನೆಲನಂ....ರೆಂಬುದನೆಂಬರ್

ಕರಕಳಭ....ನಾರುಮಪ್ಪರೇ

ಒಂದುಮೊಡಂಬಡು....ಬಾಡಮಂ

ವ/ಎಂಬುದು.....ಸಿಡಿಲ್ದು

ತೊಲಗದೆ ಗೋವುಗಾದ....ಪಳಾಳಮಂ

ಭಾಗಮನಾಸೆ....ಬೆಳ್ಳನೇ

ವಿಜಿಗೀಷುತ್ವ....ಗಂಡರೀಗಂಡರುಂ

ಪುಸಿಯೆನೆ ಸಾಮಮಂ....ಮಾಡದಿರ್ಪಿರೇ

ವ/ನಾಮೆಲ್ಲಮೊಂದೆ....ಮಾಮಸಕಮ್ ಮಸಗಿ ದುರ್ಯೋಧನನಿಮ್ತೆಂದಂ

ಆರ್ಕಡುಕೆಯ್ದು....ಬಂದುದಾಗದೇ

ಮುಳಿಯಿಸಿ....ವೆಂಬರುಮೋಳರೇ

ಗದೆಗೊಳೆ.... ಮಾಗದಿರ್ಕುಮೇ

ನೆಟ್ಟನೆ ......ನಿಂದ್ರಕೀಲದೊಳ್

ಪೊಂಗಿ ಕಡಂಗಿ....ಸುಯೋಧನಾ

ಗುರುವಿಲ್ಲಾ...ಪಾರ್ಥನಲ್ಲಾ

ಬವರಂ...ನಿರ್ಘೋಷಮಂ

ಸುರಿವ ಸರಲ್....ಬರ್ದುಂಕಲಕ್ಕುಮೇ

ವ/ ಎಂದು ಕಾಳಮೇಘದಂತು....ತಳಮಳಿಸಿ ಕಣ್ಗಾಣದೆ

ಎಳ್ಪೋಗು....ನುಡಿದೈ

ಕಡುಮುಳಿದು...ಬಿಲ್ಲಮ್

ವ/ ಅಂತು ವಿದುರಮ್..... ನೊಳವಿನಂತಿರುಳ್ಯರೆಪಾಯ್ದು-

ಮೂರಡಿ ಮಾಡಿದಂದು.....ಮುರಾಂತಕಂ

ವ/ಆಗಳ್ ದೃತರಾಷ್ಟ್ರಂ..... ಕುಂತಿಗೇಕಾಂತದೊಳಿಂತೆಂದಂ-

ಗುರು ಕೃಪ......ಧಾತ್ರಿಯೊಳ್

ವ/ ಆತನಂ ನಾನುಮೆನ್ನ ....ಪರಕೆಯಂ ಕೈಕೊಂಡು ರಥಾಂಗಧರಂ ರಥಮನೇರಿದನ್.



         .............................................









Sunday, June 12, 2011

ತೃತೀಯ ಸೆಮ್ ಬಿ.ಕಾಂ. ಪದ್ಯಗಳು ಮತ್ತು ಬಿ.ಎ.ಒಂದುಪದ್ಯ

ತೃತೀಯ ಸೆಮೆಸ್ಟರ್ ಬಿ.ಕಾಂ. ಪದ್ಯಗಳು.




ಬನದ ಸಿರಿ (ಮಂ.ವಿ.ವಿ.ಪ್ರಸಾರಾಂಗ ಪ್ರಕಟಣೆ) ಪುಸ್ತಕದಲ್ಲಿರುವ ಈ ಕೆಳಗಿನ ಪದ್ಯಗಳಿವೆ.

(೧) ಕುರುಕುಲಾರ್ಕನುಮರ್ಕನುಮಸ್ತಮೇಯ್ದಿದರ್ (ರನ್ನ)

(೨) ಕಲ್ಕಿ-ಕುವೆಂಪು

(೩) ಮುತ್ತೈದೆ ಸಾವು-ಜಿ.ಪಿ.ರಾಜರತ್ನಂ



ಇವಲ್ಲದೆ     
ಇಂದು ನಮ್ಮೀ ನಾಡು ೩ ( ನಡೆದು ಬಂದ ದಾರಿ)
       


ತೃತೀಯ ಸೆಮೆಸ್ಟರ್ ಬಿ.ಎ. ಗೆ ಇರುವ ರತ್ನಾಕರವರ್ಣಿಯ ಭರತೇಶವೈಭವದ ಆರೋಗಣೆ ಸಂಧಿಯಲ್ಲಿ ಈ ಮುಂದಿನ ಪದಗಳೊಂದಿಗೆ ಆರಂಭವಾಗುವ ಸುಮಾರು ೩೦ ಪದ್ಯಗಳು ಇವೆ.



ರಾಜರ ದೇವ....

ಕರೆದೊಬ್ಬ ಹಿತನನೀ...

ಯತಿಗಳ ಗುಣವ...

ಕಂಡರು ಮುಖಕಾಂತಿ...

ದೇವರಪರಿಯೆಂದು...

ಅಕ್ಕಾಜಿ ನೀ ನೋಡು...

ಚೆನ್ನಾಗಿ ಕಂಡಿರಿ..

ಸ್ವಾಮಿಗಾರೋಗಣೆಯಾದ...

ಎಂದಿನ ಕ್ರಮವಿಂದು...

ಪುರುಷಗನ್ನವನಿತ್ತು...

ತಾನು ಬೆರೆತುಕೊಂಡ...

ಪತಿಗುತ್ತಾರವ ಕೊಡಬಾರ...

ಬನ್ನಿರೌ ನ್ಮಗೆ...

ಗಂಡನ ನುಡಿಗೇಳ್ದ...

ಮಂಗಳ ಮೃದುತರಾಸನ...

ಸ್ತ್ರೀಯರು ತನ್ನೆಡಬಲದಲಿ...

ಹಲವರು ರಾಯನ ಪಂತಿ...

ಇವಳು ಗಮ್ಡನ ಪಂತಿಯೊ...

ಶಾಂತ ಭಾವದೊಳು...

ಅರಸನಾರೋಗಿಸುತಿದ್ದು...

ಏಕೆ ತುತ್ತಿಡರೆಂದು...

ಎಡೆಮಾಡುವಬಲೆಯರ...

ಎಲ್ಲರು ತುತ್ತಿಟ್ಟರದಕೆ...

ಜೀವಬಲ ದೇಹಬಲವ...

ರಾಜ ಕೈದೊಳೆದನು...

ನಮಗಿನ್ನು ಭೋಜನಾಂತದ...

ಕುಳ್ಳಿರಿರಕ್ಕ ನೀವೆಲ್ಲ...

ಸ್ಮರಿಸಿ ಸಿದ್ಧಾಂತ ಮಂತ್ರ..

ಹಚ್ಚಡವನು ಹೊದೆ...

ಪರಿಮಳದೊಡೆವುತ...

ನಿಮ್ದೋಲಗ ಸಾಕು...

ವಾರಿಜಾಕ್ಷಿಯರೊಳು...

...................









Saturday, June 11, 2011

ಪಠ್ಯದ ಬಗ್ಗೆ ಇನ್ನಷ್ಟು

ತೃತೀಯ ಸೆಮೆಸ್ಟರ್ ಬಿ.ಎ. ಕನ್ನಡ ಪಠ್ಯದ ಪದ್ಯಗಳು.


(೧) ಪಂಜೆ ಮಂಗೇಶರಾಯ-ಸತ್ಯಸೀಮೆಗೆ ತಾಯೆ ನಡೆಸೆನ್ನ

(೨) ಬೇಂದ್ರೆ- ದುಡ್ಡಿನ ಕಥಿ (ಮರ್ಯಾದೆ ಸಂಕಲನ)

(೩) ಜಿ.ಎಸ್.ಶಿವರುದ್ರಪ್ಪ- ಗಾಂಧಿ

(೪) ಎಲ್.ಸಿ.ಸುಮಿತ್ರಾ- ಮರೆತುಹೋದವಳು

(%) ಲೋಕೇಶ್ ಅಗಸನಕಟ್ಟೆ-ಮತ್ತೆ ಬರುತ್ತಾನೆ ಸೂರ್ಯ



ಇವಲ್ಲದೆ ಪಂಪನ ಭಾರತದ ಒಂದು ಭಾಗ ಇದೆ. ಅಕ್ಕಮಹಾದೇವಿಯ ವಚನಗಳಿವೆ. ರತ್ನಾಕರವರ್ಣಿಯ ಭರತೇಶವೈಭವದ "ಆರೋಗಣೆ ಸಂಧಿ"ಯಿಂದ ಆಯ್ದ ಪದ್ಯಗಳಿವೆ.


ತೃತೀಯ ಸೆಮೆಸ್ಟರ್ ಬಿ.ಎ. ಗದ್ಯಗಳು-
೧ .ನಂಟರು.-ತೀನಂಶ್ರೀ


೨. ಪುಸ್ತಕಂ ವನಿತಾ ವಿತ್ತಮ್-ಕುಶಾಲಪ್ಪ ಗೌಡ( ಕಡಲತಡಿಯ ಕನವರಿಕೆಯಲ್ಲಿದೆ)

. ೩. ಸಾಲವನು ಕೊಂಬಾಗ-ಅ.ರಾ.ಮಿತ್ರ.

ತೃತೀಯ ಸೆಮೆಸ್ಟರ್ ಬಿ.ಎಸ್.ಸಿ.ಗದ್ಯ-

೧. ಸಭಾಧ್ಯಕ್ಷತೆ ವಹಿಸುವುದು -ಸ,ಸ,ಮಾಳವಾಡ ( ದಶವಾರ್ಷಿಕ ಪ್ರಬಂಧಗಳು)

೨. ಲೋಗರ ಸೃಷ್ಟಿ ಲೋಕದೃಷ್ಟಿ-ಬಿ.ಎ.ವಿವೇಕ ರೈ(ಗಿಳಿಸೂವೆ)

೩. ದುಡ್ಡಿನ ದಾರಿದ್ರ್ಯ-ಪ್ರಸನ್ನ(ಯಂತ್ರಗಳನ್ನು ಕಳಚೋಣ ಬನ್ನಿ)

೪.ಮಳೆಗಾಲದಲ್ಲಿ-ಕು.ಗೋ. (ಆಯ್ದ ಲಲಿತ ಪ್ರಬಂಧಗಳು)

೫. ಗ್ ಗ್ ಗ್ ಗಣೇಶನಾದನು -ಮೀನಗುಂಡಿ ಸುಬ್ರಹ್ಮಣ್ಯಂ

ಕ್ರಿಯಾತ್ಮಕ ಕನ್ನಡದಲ್ಲಿ-

ಬಗೆಬಗೆಯ ಕನ್ನಡ- ಕನ್ನಡ ಭಾಶೆ ವಿಶ್ವಕೋಶ -ಹಮ್ಪಿ ವಿವಿ -ಕೆ.ವಿ.ನರಾಯಣ

ಭಾಷಾಂತರ- ಕೇದಗೆ ( ಪ್ರಸಾರಾಂಗ ಮಂ.ವಿ.ವಿ.)ಪಟ್ಯಪುಸ್ತಕದಿಂದ ಆಯ್ದದ್ದು.





ತೃತೀಯ ಸೆಮೆಸ್ಟರ್ ಬಿ ಎಸ್ ಸಿ ಪದ್ಯಗಳು

(೧)ಮಹಾಶ್ವೇತೆ ಸಂದರ್ಶನ-ನಾಗವರ್ಮ

(೨) ಊರ್ವಶಿಯ ಶಾಪ-ಕುಮಾರವ್ಯಾಸ

(೩) ಪಂಡಿತರು ಪಮ್ಡಿತರೆ- ಕಡೆಂಗೋಡ್ಲು

(೪) ನವಿಲೇ ನವಿಲೇ -ಚಂ.ಕಂಬಾರ



ತೃತೀಯ ಸೆಮೆಸ್ಟರ್ ಬಿ.ಕಾಂ. ಗದ್ಯಗಳು

೧) ಗಾಂಧಿ ಈ ಹೊತ್ತಿನ ಕನ್ನಡಿಯಲ್ಲಿ- ಜಿ.ಎಸ್.ಶಿವರುದ್ರಪ್ಪ

೨) ಸಣ್ಣ ಲೋಪ,ದೊಡ್ಡ ಪ್ರಮಾದ-ಮಿರ್ಜಾ ಬಶಿರ್

೩) ಏನು ರುಚಿಯೋ ಅದನೆ ಕುಡಿ- ಕಿ.ರ. ನಾಗರಾಜ( ಮತ್ತೆ ಮತ್ತೆ ಬೇಂದ್ರೆ)

೪) ಸೋಲಿಗರ ಜಲ್ಲೆಸಿದ್ದಮ್ಮ(ಸಂಗ್ರಹ)- ಕಾಳೆಗೌಡ ನಾಗವಾರ ಸಂಪಾದಿಸಿದ ಗರಿಗೆದರಿದ ನವಿಲು ಸಂಕಲನದಿಂದ.

೫) ನಾನು ತೆಂಗಿನ ತೋಟ ಖರೀದಿಸಲು ಹೋದೆ-ಎಸ್.ಎಮ್.ಪೆಜತ್ತಾಯ( ಕಾಗದದ ದೋಣಿ ಕೃತಿಯಿಂದ)


ಹೆಚ್ಚಿನ ಮಾಹಿತಿಗಾಗಿ ಆಯಾ ಪಠ್ಯಗಳ ಸಂಪಾದಕರನ್ನು ಸಂಪರ್ಕಿಸಬಹುದು. ಸಂಪಾದಕರ ಬಗ್ಗೆ ತಿಳಿಯಲು ಡಾ.ಸತ್ಯನಾರಾಯಣ ಮಲ್ಲಿಪಟ್ಟಣ ಇವರನ್ನು ಸಂಪರ್ಕಿಸಬಹುದು.


ಪಠ್ಯದ ಬಗ್ಗೆ

ದ್ವಿತೀಯ ಪದವಿ ಹೊಸ ಪಠ್ಯ ಪುಸ್ತಕಗಳು:




ತೃತೀಯ ಸೆಮೆಸ್ಟರ್ ಬಿ.ಎ. - ಕಬಿತ (ಕಾವ್ಯ ಸಂಕಲನ)

ಕೆಡ್ಡಸ (ಗದ್ಯ)

ಗಾಂಧಿ ಬಂದ -ಎಚ್.ನಾಗವೇಣಿ (ಸಂಗ್ರಹರೂಪ)



ತೃತೀಯ ಸೆಮೆಸ್ಟರ್ ಬಿ.ಕಾಂ.- ಪಾಂಗೊಳ ( ಕಾವ್ಯ ಸಂಕಲನ)

ಪೊಮ್ಮಾಲೆ (ಗದ್ಯ)

ಪಯಣ (ಲಕ್ಷ್ಮಣ ಕೊಡಸೆಯವರ ಕಾದಂಬರಿ-ಪೂರ್ತಿ) ಇದು ಈಗಾಗಲೇ ಮಾರುಕಟ್ಟೆಗೆ ಬಂದಿದೆ.



ತೃತೀಯ ಸೆಮೆಸ್ಟರ್ ಬಿ.ಎಸ್ ಸಿ.- ಆಯನ( ಕಾವ್ಯ ಸಂಕಲನ)

ಅಂಗಣ (ಗದ್ಯ)

ಮಾಯಾಲೋಕ- ಪೂಚಂತೇಜಸ್ವಿ (ಸಂಗ್ರಹರೂಪ

ಪಠ್ಯ

ತೃತೀಯ ಸೆಮೆಸ್ಟರ್ ಬಿ.ಎ. ಕನ್ನಡ ಪಠ್ಯದ ಪದ್ಯಗಳು.


(೧) ಪಂಜೆ ಮಂಗೇಶರಾಯ-ಸತ್ಯಸೀಮೆಗೆ ತಾಯೆ ನಡೆಸೆನ್ನ

(೨) ಬೇಂದ್ರೆ- ದುಡ್ಡಿನ ಕಥಿ (ಮರ್ಯಾದೆ ಸಂಕಲನ)

(೩) ಜಿ.ಎಸ್.ಶಿವರುದ್ರಪ್ಪ- ಗಾಂಧಿ

(೪) ಎಲ್.ಸಿ.ಸುಮಿತ್ರಾ- ಮರೆತುಹೋದವಳು

(%) ಲೋಕೇಶ್ ಅಗಸನಕಟ್ಟೆ-ಮತ್ತೆ ಬರುತ್ತಾನೆ ಸೂರ್ಯ



ಇವಲ್ಲದೆ ಪಂಪನ ಭಾರತದ ಒಂದು ಭಾಗ ಇದೆ. ಅಕ್ಕಮಹಾದೇವಿಯ ವಚನಗಳಿವೆ. ರತ್ನಾಕರವರ್ಣಿಯ ಭರತೇಶವೈಭವದ "ಆರೋಗಣೆ ಸಂಧಿ"ಯಿಂದ ಆಯ್ದ ಪದ್ಯಗಳಿವೆ.

ಪದವಿ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಅತೀ ಹೆಚ್ಚು ಅಂಕ ಪಡೆದವರು.

ತರಗತಿ ಹೆಸರು ಕಾಲೇಜು ಪಡೆದ ಅಂಕ ತರಗತಿ ಹೆಸರು ಕಾಲೇಜು ಪಡೆದ ಅಂಕ


1.ಪ್ರಥಮ ಬಿ.ಎ ಶ್ರೀ ಗೌರಿ ಸರಕಾರಿ ಪ್ರಥಮ ದರ್ಜೆ ಕಾಲೇಜು , ಸುಳ್ಯ ೧೮೨/೨೦೦

2.ದ್ವಿತೀಯ ಬಿ.ಎ. ಮಮತಾ ಸರಕಾರಿ ಪ್ರಥಮ ದರ್ಜೆ ಕಾಲೇಜು , ಸುಳ್ಯ ೧೭೫/೨೦೦

3. ದ್ವಿತೀಯ ಬಿ.ಎ. ಮಮತಾ ಸರಕಾರಿ ಪ್ರಥಮ ದರ್ಜೆ ಕಾಲೇಜು , ಸುಳ್ಯ ೧೭೫/೨೦೦

4. ದ್ವಿತೀಯ ಬಿ.ಎ. ಅಶ್ವಿತಾ ಪೂರ್ಣ ಪ್ರಜ್ಞ ಕಾಲೇಜು , ಉಡುಪಿ ೧೭೫/೨೦೦

5. ದ್ವಿತೀಯ ಬಿ.ಎ. ಅಶ್ವಿತಾ ಪೂರ್ಣ ಪ್ರಜ್ಞ ಕಾಲೇಜು , ಉಡುಪಿ ೧೭೫/೨೦೦

6. ಪ್ರಥಮ ಬಿ.ಕಾಂ ಸುಜಾತ ವಿಜಯ ಕಾಲೇಜು, ಮುಲ್ಕಿ ೧೭೨/೨೦೦

7. ಪ್ರಥಮ ಬಿ.ಕಾಂ ಸುಜಾತ ವಿಜಯ ಕಾಲೇಜು, ಮುಲ್ಕಿ ೧೭೨/೨೦೦

8. ದ್ವಿತೀಯ ಬಿ.ಕಾಂ ವಿಕ ಮನ್ಕರೇನಸ್ ಪೂರ್ಣ ಪ್ರಜ್ಞ ಕಾಲೇಜು , ಉಡುಪಿ ೧೭೫/೨೦೦

9. ದ್ವಿತೀಯ ಬಿ.ಕಾಂ ವಿಕ ಮನ್ಕರೇನಸ್ ಪೂರ್ಣ ಪ್ರಜ್ಞ ಕಾಲೇಜು , ಉಡುಪಿ ೧೭೫/೨೦೦

10. ದ್ವಿತೀಯ ಬಿ.ಕಾಂ ಸರ್ತಿಕಾ ಭುವನೇಂದ್ರ ಕಾಲೇಜು , ಕಾರ್ಕಳ ೧೭೫/೨೦೦

11. ದ್ವಿತೀಯ ಬಿ.ಕಾಂ ಸರ್ತಿಕಾ ಭುವನೇಂದ್ರ ಕಾಲೇಜು , ಕಾರ್ಕಳ ೧೭೫/೨೦೦

12. ಪ್ರಥಮ ಬಿ.ಬಿ.ಎಂ ಯಶ್ವಿತಾ ಎಸ್.ಡಿ.ಎಂ(ಬಿ.ಬಿ.ಎಂ) ಕಾಲೇಜು, ಮಂಗಳೂರು ೧೫೯/೨೦೦
13. ಪ್ರಥಮ ಬಿ.ಬಿ.ಎಂ ಯಶ್ವಿತಾ ಎಸ್.ಡಿ.ಎಂ(ಬಿ.ಬಿ.ಎಂ) ಕಾಲೇಜು, ಮಂಗಳೂರು ೧೫೯/೨೦೦

14. ಪ್ರಥಮ ಬಿ.ಸಿ.ಎ ಕೃಷ್ಣ ಪ್ರಸಾದ ಮಿಲಾಗ್ರೀಸ್ ಕಾಲೇಜು, ಕಲ್ಯಾಣಪುರ ೧೫೫/೨೦೦
15. ಪ್ರಥಮ ಬಿ.ಸಿ.ಎ ಕೃಷ್ಣ ಪ್ರಸಾದ ಮಿಲಾಗ್ರೀಸ್ ಕಾಲೇಜು, ಕಲ್ಯಾಣಪುರ ೧೫೫/೨೦೦

16. ಪ್ರಥಮ ಬಿ.ಎಸ್ಸಿ. ಶ್ರುತಿ. ಎಸ್ ಪೂರ್ಣ ಪ್ರಜ್ಞ ಕಾಲೇಜು , ಉಡುಪಿ ೧೭೭/೨೦೦
17. ಪ್ರಥಮ ಬಿ.ಎಸ್ಸಿ. ಶ್ರುತಿ. ಎಸ್ ಪೂರ್ಣ ಪ್ರಜ್ಞ ಕಾಲೇಜು , ಉಡುಪಿ ೧೭೭/೨೦೦

18. ದ್ವಿತೀಯ ಬಿ.ಎಸ್ಸಿ. ಸುಜಾತಭೋಜ ಮರಕಾಲ ಮಿಲಾಗ್ರೀಸ್ ಕಾಲೇಜು, ಕಲ್ಯಾಣಪುರ ೧೭೮/೨೦೦
19. ದ್ವಿತೀಯ ಬಿ.ಎಸ್ಸಿ. ಸುಜಾತಭೋಜ ಮರಕಾಲ ಮಿಲಾಗ್ರೀಸ್ ಕಾಲೇಜು, ಕಲ್ಯಾಣಪುರ ೧೭೮/೨೦೦

20. ಪ್ರಥಮ ಬಿ.ಎಸ್.ಡಬ್ಲ್ಯು ಮಹೇಶ್ ಕುಮಾರ್ ಭುವನೇಂದ್ರ ಕಾಲೇಜು , ಕಾರ್ಕಳ ೧೬೦/೨೦೦
21. ಪ್ರಥಮ ಬಿ.ಎಸ್.ಡಬ್ಲ್ಯು ಮಹೇಶ್ ಕುಮಾರ್ ಭುವನೇಂದ್ರ ಕಾಲೇಜು , ಕಾರ್ಕಳ ೧೬೦/೨೦೦

22. ದ್ವಿತೀಯ ಬಿ.ಎಸ್.ಡಬ್ಲ್ಯು ಗಾಯತ್ರಿ ಮತ್ತು ಶ್ಯೆಲಜ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕೋಟ ಪಡುಕರೆ ೧೬೫/೨೦೦ 23. ದ್ವಿತೀಯ ಬಿ.ಎಸ್.ಡಬ್ಲ್ಯು ಗಾಯತ್ರಿ ಮತ್ತು ಶ್ಯೆಲಜ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕೋಟ ಪಡುಕರೆ ೧೬೫/೨೦೦

24. ಪ್ರಥಮ ಬಿ.ಹೆಚ್.ಆರ್.ಡಿ ರೀಸಿಕಾ ಎಸ್.ಡಿ.ಎಂ(ಬಿ.ಬಿ.ಎಂ) ಕಾಲೇಜು, ಮಂಗಳೂರು ೧೪೮/೨೦೦
25.  ಪ್ರಥಮ ಬಿ.ಹೆಚ್.ಆರ್.ಡಿ ರೀಸಿಕಾ ಎಸ್.ಡಿ.ಎಂ(ಬಿ.ಬಿ.ಎಂ) ಕಾಲೇಜು, ಮಂಗಳೂರು ೧೪೮/೨೦೦

26. ದ್ವಿತೀಯ ಬಿ.ಹೆಚ್.ಆರ್.ಡಿ ಪ್ರಫುಲ್ಲ ಎಸ್.ಡಿ.ಎಂ(ಬಿ.ಬಿ.ಎಂ) ಕಾಲೇಜು, ಮಂಗಳೂರು ೧೬೯/೨೦೦
27.ದ್ವಿತೀಯ  ಬಿ.ಹೆಚ್.ಆರ್.ಡಿ ಪ್ರಫುಲ್ಲ ಎಸ್.ಡಿ.ಎಂ(ಬಿ.ಬಿ.ಎಂ) ಕಾಲೇಜು, ಮಂಗಳೂರು ೧೬೯/೨೦೦

ಬಸವಣ್ಣರ ವಚನದ ಪದಕ್ಕೆ ಬೇರೆ ಅರ್ಥ

ಬಸವಣ್ಣರ ವಚನದ ಪದಕ್ಕೆ ಬೇರೆ ಅರ್ಥ   -  ಅಜಕ್ಕಳ ಗಿರೀಶ ಭಟ್


ಓ.ಎಲ್.ನಾಗಭೂಷಣಸ್ವಾಮಿಯವರು ತಮ್ಮ "ವಚನಸಾವಿರ" ಕೃತಿಯಲ್ಲಿ ಹೀಗೆ ಹೇಳಿದ್ದಾರೆ-"ಅರ್ಥ ಗೊತ್ತಿದೆ,

ಸುಸ್ಪಷ್ಟವಾಗಿದೆ ಎಂದೇ ಭಾವಿಸಿ ನಾವು ವಚನಗಳು ಒಳಗೊಂಡಿರುವ ಅನುಭವಕ್ಕೆ ಮುಚ್ಚಿದ

ಮನಸ್ಸಿನವರಾಗಿಬಿಡುತ್ತೇವೆ.ಪರಿಚಿತವಾದದ್ದನ್ನೂ ಅಪರಿಚಿತಗೊಳಿಸಿಕೊಳ್ಳದ ಹೊರತು ಓದಿನ ಹೊಸತನ

ಸಾಧ್ಯವಾಗುವುದಿಲ್ಲ"(ಪು.೯-೧೦). ನಿಜವಾದ ಮಾತು ಇದು.

ನಾನಿಲ್ಲಿ ಹೇಳಬೇಕೆಂದಿರುವ ವಚನದಲ್ಲಿ ಇಡೀ ವಚನದ ಅರ್ಥವೇನೂ ಅಂಥ ಬದಲಾವಣೆಗೊಳ್ಳುವುದಿಲ್ಲ.

ಆದರೆ ಶಬ್ದವೊಂದರ ಅರ್ಥ ಮಾತ್ರ , ಈವರೆಗೆ ವ್ಯಾಖ್ಯಾನಿಸಿರುವುದಕ್ಕಿಂತ ಬೇರೆ ಅನ್ನಿಸಿದೆ.

ಇದು ತುಂಬ ಪ್ರಸಿದ್ಧ ವಚನ. ಅನೇಕರು ಬೇರೆ ಬೇರೆ ಕಡೆ ಉದ್ಧರಿಸಿದ ವಚನ. ಬಸವಣ್ಣನವರ ವಚನ ಹೀಗಿದೆ.

ಮೇಲಾಗಲೊಲ್ಲೆನು ಕೀಳಾಗಲೊಲ್ಲದೆ

ಕೀಳಿಂಗಲ್ಲದೆ ಹಯನು ಕರೆವುದೆ

ಮೇಲಾಗಿ ನರಕದೊಳೋಲಾಡಲಾರೆನು

ನಿಮ್ಮ ಶರಣರ ಪಾದಕ್ಕೆ ಕೀಳಾಗಿರಿಸು

ಮಹಾದಾನಿ ಕೂಡಲಸಂಗಮದೇವಾ

ಹೀಗೆ ಕೀಳಿಂಗಲ್ಲದೆ ಹಯನು ಕರೆಯದು ಎಂದು ದಾಸಿಮಯ್ಯನ ವಚನದಲ್ಲೂ ಬರುತ್ತದೆ.(ಪು.೧೩೦ ವಚನಸಾವಿರ)

ಕೀಳು ಅನ್ನುವುದಕ್ಕೆ ಕೆಳಗೆ ಅಂತ ಅರ್ಥ ಹೇಗೂ ಇದೆಯಲ್ಲ. ಪಾದಕ್ಕೆ ಕೀಳಾಗಿರಿಸು ಅನ್ನುವಲ್ಲಿ ಕೇಳಗೆ ಅನ್ನುವ

ಅರ್ಥ ಸುಲಭವಾಗಿ ನಿಲ್ಲುತ್ತದೆ.ಲಥಾ ಮೈಸೂರು ಅವರು ಮೇಲಾಗಲೊಲ್ಲೆನು ಅನ್ನುವ ಪುಸ್ತಕದಲ್ಲಿ "ಕೆಳಗಿದ್ದವರಿಗೆ

ಮಾತ್ರ ಹಯನು ಕರೆಯಲು ಸಾಧ್ಯ" ಅಂತ ಹೇಳಿದ್ದಾರೆ(ಪು.೫).

ಕೀಳು ಎಂಬುದಕ್ಕೆ ಆಕಳ ಕರು ಎಂಬರ್ಥವನ್ನು ಎಸ್.ವಿದ್ಯಾಶಂಕರ್ ಕೂಡ ನೀಡಿದ್ದಾರೆ(ವಚನಗಳು,ಪು.೧೬೭).

ಕೀಳು ಅಂದರೆ ಕೆಳಮಟ್ಟ, ಹಸುವಿನ ಕರು ಅಂತ ಓ.ಎಲ್.ಎನ್. ಅರ್ಥ ನೀಡಿದ್ದಾರೆ(ವಚನಸಾವಿರ ಪು.೩೭೩)

ಹೀಗೆ ಕೀಳಿಂಗಲ್ಲದೆ ಹಯನು ಕರೆವುದೆ ಅನ್ನುವಲ್ಲಿ ಕೀಳು ಅನ್ನುವುದಕ್ಕೆ ಹಸುವಿನ ಕರು ಅನ್ನುವುದನ್ನೇ ಬಹುತೇಕ

ಎಲ್ಲರೂ ಹೇಳುತ್ತಾರೆ.

ನನಗೆ ಹಾಗನ್ನಿಸುವುದಿಲ್ಲ.ಇಲ್ಲಿ ಕೀಳು ಅಂದರೆ ಹಸುವನ್ನು ಕಟ್ಟಿದ ಹಗ್ಗ ಇರಬೇಕು.

ರಾಘವಾಂಕನ ಹರಿಶ್ಚಂದ್ರ ಕಾವ್ಯದಲ್ಲಿ ಲೋಹಿತಾಶ್ವನ ಬಗ್ಗೆ ಹೇಳುವಾಗ "ಕೀಳಿಲೊಳು ಕಟ್ಟುವಾಗ" ಅಂತ

ಬರುತ್ತದೆ. ಇದಕ್ಕಿಂತ ಮುಖ್ಯವಾಗಿ ಪಂಪರಾಮಾಯಣದಲ್ಲಿ "ಕೀಳನಳವಡೆ ಹಿಡಿದು" ಎಂದು ಬರುತ್ತದೆ.

(ಇಲ್ಲಿ ಕೀಳು ಅನ್ನುವಲ್ಲಿ ಹಳೆಗನ್ನಡದಲ್ಲಿ ಬರುವ ರಳ ಇರಬಹುದು,ನನಗೆ ಅದನ್ನು ಟೈಪುಮಾಡಲು ಗೊತ್ತಿಲ್ಲ.)

ಇದು ಕುದುರೆಯ ಕಡಿವಾಣದ ಬಗ್ಗೆ ಇರುವುದು. ಪಂಪರಾಮಾಯಣ ಮತ್ತು ಹರಿಶ್ಚಂದ್ರ ಕಾವ್ಯಗಳು ಬಸವಣ್ಣರ

ಆಸುಪಾಸಿನ ಕಾಲದವು ಎಂಬುದನ್ನು ಗಮನಿಸಬೇಕು.

ಬಸವಣ್ಣ ಬೇರೆಡೆ ಕರುವನ್ನು ಕರು ಎಂದೇ ಕರೆದದ್ದುಂಟು. ಉದಾ; ಊಡದ ಆವಿಂಗೆ ಉಣ್ಣದ ಕರುವ ಬಿಟ್ಟಂತೆ.

ತುರುಗಾಹಿ ರಾಮಣ್ಣನ ವಚನದಲ್ಲಿ "ಕರುವಿಗೆ ಮೂರು ಹಣ" ಅಂತ ಬರುತ್ತದೆ.

ಎಳೆಗರು ಎಂಬ ಪದ ಅಕ್ಕ ನಾಗಮ್ಮನ ವಚನದಲ್ಲಿ ಬರುತ್ತದೆ.

ಹಾಗಾದರೆ ಬಸವಣ್ಣ ಕೀಳಿಂಗಲ್ಲದೆ ಎಂದದ್ದು ಯಾಕೆ? ಅದನ್ನು ಬೇರೆ ಹೇಗೆ ವ್ಯಾಖ್ಯಾನಿಸುವುದು?

ಅದು ವಾಸ್ತವವಾಗಿ ಬಸವಣ್ಣರ ಶಬ್ದ ಚಮತ್ಕಾರಕ್ಕೆ ಒಂದು ಉದಾಹರಣೆ.

ವಚನಗಳ ಭಾಷೆ ರೂಪಕದ್ದು .ಹಾಗೆಯೇ ಅಲ್ಲಿ ಶಬ್ದ ಚಮತ್ಕಾರ ಅಪರೂಪವೇನಲ್ಲ.

"ಕೀಳು"ವಿಗೆ ಕರು ಎಂದರ್ಥ ಮಾಡಿದರೂ ಅದು ಶಬ್ದಚಮತ್ಕಾರವೇ ಹೌದು.

ಇಂಥದ್ದು ಬಸವಣ್ಣರಲ್ಲಿ ಬೇಕಾದಷ್ಟಿವೆ.

ಉದಾ; ಬಿದಿರಲಂದಣವಕ್ಕು

ಬಿದಿರೆ ಸತ್ತಿಗೆಯಕ್ಕು

ಬಿದಿರಲ್ಲಿ ಗುಡಿ

ಬಿದಿರದವರ ಮೆಚ್ಚ

ಕೂಡಲಸಂಗಮದೇವ

ಹಾಗೆಯೇ, ವಚನದಲ್ಲಿ ನಾಮಾಮೃತ ತುಂಬಿ......

.....ನಿಮ್ಮ ಚರಣಕಮಲದೊಳಾನು ತುಂಬಿ ಇತ್ಯಾದಿ.

ಕೀಳು ಅನ್ನುವುದನ್ನು ಕರು ಎಂದಿಟ್ಟುಕೊಂಡರೂ ಹಗ್ಗ ಎಂದಿಟ್ಟುಕೊಂಡರೂ ಇಡಿಯಾಗಿ ವಚನದ

ಅರ್ಥದಲ್ಲಿ ಅಂಥ ವ್ಯತ್ಯಾಸವೇನೂ ಆಗೋದಿಲ್ಲ. ಎರಡು ಸಂದರ್ಭಗಳಲ್ಲೂ ಅದು ಕೇವಲ ಶಬ್ದಚಮತ್ಕಾರವೇ .

ಎರಡು ಸಂದರ್ಭಗಳಲ್ಲು ಫೇಕ್ಚುವಲ್ ಆಗಿ ಸರಿಯೇ, ಯಾಕೆಂದರೆ ಹಗ್ಗದಲ್ಲಿ ಕಟ್ಟದೆ ಹಾಲು ಕರೆಯಲು ಸಾಧ್ಯವಿಲ್ಲ.

ಕರು ಬಿಡದೆ ಹಸು ಹಾಲು ಸೊರೆಸುವುದಿಲ್ಲ.

(ಇದು ಹಿಂದಿನ ಕಾಟು ದನಗಳ ಬಗ್ಗೆ,ಅಂದರೆ ಊರ ದನಗಳು- ಈಚಿನ ಹೊಸ ತಳಿಗಳಿಗೆ ಕರುವೂ ಬೇಡ

ಹೋರಿಯೂ ಬೇಡ ಬಿಡಿ.). ಆದರೆ ಕೀಳು ಎಂಬ ಪದ ಹಳೆ ಸಾಹಿತ್ಯದಲ್ಲಿ ಬೇರೆಲ್ಲಾದರೂ ಕರು

ಎಂಬ ಅರ್ಥದಲ್ಲಿ ಬಳಕೆಯಾಗಿದೆಯೇ? ಇಲ್ಲ ಎಂದು ಖಡಾ ಖಂಡಿತ ಹೇಳುವಷ್ಟು ನಾನು ಓದಿಲ್ಲ.

ಯಾರಾದರೂ ಗೊತ್ತಿದ್ದರೆ ದಯವಿಟ್ಟು ಹೇಳಬೇಕು.



ಕೊನೆಬೆಡಿ: ಸೀರೆ ಹೆಚ್ಚು ಭಾರವಿದ್ದಷ್ಟೂ ಬೆಲೆ ಜಾಸ್ತಿ. ಭಾರ ಗೊತ್ತಾಗಬೇಕಾದರೆ ಎತ್ತಿಯೇ

ನೋಡಬೇಕಷ್ಟೆ.